ಗ್ರಾಮೀಣ ಭಾಗದ 14 ಫೀಡಿಂಗ್ ಪದವಿ ಕಾಲೇಜುಗಳನ್ನು ಒಳಗೊಂಡಂತೆ , ಸರ್ಕಾರಿ ಪ್ರಥಮದರ್ಜೆ ಕಾಲೇಜು ಶಿಕಾರಿಪುರ, ಇಲ್ಲಿ ಅಲ್ಲಮ ಸ್ನಾತಕೋತ್ತರ ಅಧ್ಯಯನ ವಿಭಾಗವು, ಕುವೆಂಪು ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ 2010 ನೇ ಶೈಕ್ಷಣಿಕ ಸಾಲಿನಲ್ಲಿ ಕಾರ್ಯಚಟುವಟಿಕೆಯನ್ನು ಆರಂಭಿಸಿತು. ಇಲ್ಲಿಯವರೆಗೆ 09 ಶೈಕ್ಷಣಿಕ ವರ್ಷಗಳಲ್ಲಿ ಸರಾಸರಿ 200 ವಿಧ್ಯಾರ್ಥಿಗಳು ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು , ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ , ಸಂಶೋಧಕರಾಗಿ , ಬೇರೆ ಬೇರೆ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತೀ ವರ್ಷ 25 ಜನ ವಿದ್ಯಾರ್ಥಿಗಳನ್ನು ಮೀಸಲಾತಿ ಮತ್ತು ಮೇರಿಟ್ ಗಳ ಅನ್ವಯ ವಿಶ್ವವಿದ್ಯಾಲಯವು ಆಯ್ಕೆಮಾಡಿ ನಮ್ಮ ಕಾಲೇಜಿನಲ್ಲಿ ದಾಖಲಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ವಿಶ್ವವಿದ್ಯಾಲಯವು ನಿಗದಿಪಡಿಸಿದ ಪಠ್ಯಗಳನ್ನು ನುರಿತ ಅಧ್ಯಾಪಕರುಗಳು ನಿರ್ವಹಿಸುತ್ತಾರೆ. ಪ್ರತೀ ಶೈಕ್ಷಣಿಕ ಅವಧಿಯಲ್ಲಿ ವಿವಿಧ ವಿಚಾರ ಸಂಕಿರಣಗಳು , ಕಾರ್ಯಾಗಾರಗಳು , ವಿದ್ಯಾರ್ಥಿ ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಇತಿಹಾಸಿಕ ಸ್ಥಳಗಳ ವೀಕ್ಷಣೆ , ಶಾಸನಗಳ ಅಧ್ಯಯನ ವಿವಿಧ ಸಂಘ ಸಂಸ್ಥೆಗಳ ಅಕಾಡೆಮಿ ಮತ್ತು ಪ್ರಾಧಿಕಾರಗಳ ಸಹಯೋಗದಲ್ಲಿ ನಡೆಸಲಾಗುತ್ತದೆ. ಕರ್ನಾಟಕದ ಪ್ರಖ್ಯಾತ ಸಾಹಿತಿ ಮತ್ತು ರಂಗಭೂಮಿ ತಜ್ಞರು, ಚಿಂತಕರು ವಿಭಾಗಕ್ಕೆ ಭೇಟಿ ನೀಡುತ್ತಾರೆ. ಈ ಎಲ್ಲಾ ಕಾರ್ಯಕ್ರಮಗಳ ದಾಖಲೀಕರಣವು ವಿಭಾಗದಲ್ಲಿ ಸಿದ್ದವಿದೆ. |