Home

ಕಾಲೇಜಿನ ಕುರಿತು

ಸರ್ಕಾರಿ  ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ 1991ರಲ್ಲಿ ಆರಂಭಗೊಂಡಿತು. ಇದು ಗ್ರಾಮೀಣ ಭಾಗದಲ್ಲಿದ್ದು  ಶಂಕರನಾರಾಯಣ ಸುತ್ತಮುತ್ತಲಿನ 40 ಕಿ.ಮೀ. ವ್ಯಾಪ್ತಿಯ  ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಯುವಜನತೆಗೆ ಗುಣಮಟ್ಟದ  ಉನ್ನತ ಶಿಕ್ಷಣದ  ಅವಕಾಶವನ್ನು ಒದಗಿಸಿದೆ. ಆರಂಭದಲ್ಲಿ ಕೇವಲ 30 ವಿದ್ಯಾರ್ಥಿಗಳಿಂದ ಆರಂಭವಾದ ಕಾಲೇಜಿನಲ್ಲಿ ಪ್ರಸ್ತುತ 706 ವಿದ್ಯಾರ್ಥಿಗಳಿದ್ದಾರೆ. ಪಶ್ಚಿಮಘಟ್ಟ ಮತ್ತು ಅರಬ್ಬಿ ಸಮುದ್ರ ಪರಿಸರ ವ್ಯಾಪ್ತಿಯ 15 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ 4500 ಚದರ ಅಡಿ ವ್ಯಾಪ್ತಿಯಲ್ಲಿ ಕಾಲೇಜು ನಿರ್ಮಾಣವಾಗಿದೆ. ಆರಂಭದಲ್ಲಿ ಸರ್ಕಾರದ ಅನುದಾನ ಮತ್ತು ನಬಾರ್ಡ್ ಅನುದಾನದಲ್ಲಿ ಕಾಲೇಜಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಯಿತು. ನ್ಯಾಕ್ ನಿಂದ 2  ಎಫ್ , 12 ಬಿ ಮಾನ್ಯತೆಗಳಿಸಿದ್ದು, ಪ್ರಸ್ತುತ ನ್ಯಾಕ್ ಪುನರ್ ಮೌಲ್ಯಾಂಕಿತಗೊಂಡು " B++”  ಮಾನ್ಯತೆಯನ್ನು ಗಳಿಸಿಕೊಂಡಿದೆ. ಕಾಲೇಜಿನಲ್ಲಿ 18 ಕೊಠಡಿಗಳಿದ್ದು ಅವುಗಳನ್ನು ಸ್ಮಾರ್ಟ್ ಕ್ಲಾಸ್ ರೂಂಗಳಾಗಿ ಉನ್ನತೀಕರಿಸಲಾಗಿದೆ. ಕಾಲೇಜು ರೂಸಾ ಅನುದಾನಗಳಿಸಿಕೊಂಡಿದ್ದು ಜ್ಞಾನಸಂಗಮ ಇಂಟ್ರಾನೆಟ್ ಸೌಲಭ್ಯವನ್ನು ಹೊಂದಿದೆ. ಕಾಲೇಜಿನಲ್ಲಿ ಗಣಕಯಂತ್ರ ಕೊಠಡಿ ಇದ್ದು 36 ಗಣಕಯಂತ್ರಗಳನ್ನು ಹೊಂದಿದೆ. ಕಾಲೇಜು ಉಪಗ್ರಹ  ಆಧಾರಿತ ಶಿಕ್ಷಣ ಸೌಲಭ್ಯ ಮತ್ತು ಜಿಮ್ ಸೌಲಭ್ಯವನ್ನು ಹೊಂದಿದೆ.

 

 

 

 

 

 

 

Notifications | Read More

Events | Read More

  • No Events

Gallery | View All