Home

 

                                            CLICK HERE FOR ADMISSION INFORMATION 2020-21

                                                                         PROSPECTUS 2020-21

                                                                    GLIPMSES OF THE COLLEGE 

                                             ONLINE LIBRARY MEMBERSHIP FORM 2020-21 FOR I YEAR STUDENTS

                                                           Important Notice to Students

                                                   Time Table, Tutorward and Committees

 

 

ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅಂತರ್ಜಾಲ ತಾಣಕ್ಕೆ ಸ್ವಾಗತ

ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಪ್ರಖ್ಯಾತವಾದ ಸಾಗರ ನಗರವು ಕೆಳದಿ ವೆಂಕಟಪ್ಪ ನಾಯಕನಿಂದ ಸ್ಥಾಪಿಸಲ್ಪಟ್ಟಿತು. ಈತನು 1592 ರಿಂದ 1629 ರ ಮಧ್ಯಭಾಗದಲ್ಲಿ ಇದ್ದನು. ಸಾಗರವು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ತಾಲ್ಲೂಕು ಕೇಂದ್ರವಾಗಿದೆ. ಇದು ದೇಶ ವಿದೇಶಗಳಿಂದಲೂ ಪ್ರವಾಸಿಗರನ್ನು ಕೈಬೀಸಿ ಕರೆಯುವುದಲ್ಲದೇ ಕೋಮು ಸಾಮರಸ್ಯಕ್ಕೆ ಹೆಸರಾಗಿದೆ. ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು 26-08-1991 ರಲ್ಲಿ ಕೇವಲ 38 ವಿದ್ಯಾರ್ಥಿನೀಯರೊಂದಿಗೆ ಪ್ರಥಮ ಬಿ.ಎ. ಮತ್ತು ಬಿ.ಕಾಂ.ತರಗತಿಗಳು ಪ್ರಾರಂಬಿಸಿದ್ದು, ಪ್ರಸ್ತುತ 05 ಸ್ನಾತಕ ಪೂರ್ವ ಪದವಿ ತರಗತಿಗಳನ್ನು ಹೊಂದಿದೆ. ಕಲೆ, ವಾಣಿಜ್ಯ, ವಿಜ್ಞಾನ ವ್ಯವಸ್ಥಾಪಕ ಶಿಕ್ಷಣ, ಗಣಕ ವಿಜ್ಷಾನ ಇವುಗಳಲ್ಲಿ ಸ್ನಾತಕ ಪೂರ್ವ ತರಗತಿಗಳು ನಡೆಯುತ್ತಿವೆ. ಅಷ್ಟೇ ಅಲ್ಲದೇ ಸ್ನಾತಕೋತ್ತರ ಶಿಕ್ಷಣಗಳಾದ ಎಂ.ಕಾಂ.ಮತ್ತು ಎಂ.ಎಸಿ.್ಸ ಗಣಿತಶಾಸ್ತ್ರ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಪ್ರವೇಶಾತಿಯು ಆರಂಭದಿಂದಲೂ ಅತ್ಯಂತ ವೇಗ ಗತಿಯಲ್ಲಿ ಸಾಗಿದ್ದು ಸ್ನಾತಕ ಪೂರ್ವ ಮತ್ತು ಸ್ನಾತಕೋತ್ತರ ಸೇರಿ ಒಟ್ಟು 2640 ವಿದ್ಯಾರ್ಥಿನೀಯರು ಅಧ್ಯಯನ ನಡೆಸುತ್ತಿದ್ದಾರೆ. ಅಲ್ಲದೆ ಅನುಭವಿ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದವು ಕಾಲೇಜಿನ ಏಳಿಗೆಗೆ ಅವಿರತವಾಗಿ  ಶ್ರಮಿಸುತ್ತಿದೆ. ಆರ್ಥಿಕವಾಗಿ ದುರ್ಬಲ ಹಿನ್ನೆಲೆಯಿಂದ ಬಂದಂತಹ ವಿದ್ಯಾರ್ಥಿನೀಯರಿಗೆ ಉನ್ನತ ಶಿಕ್ಷಣ ಒಂದು ಮರೀಚಿಕೆಯಾಗಿತ್ತು ಇದನ್ನು ಮನಗಂಡು ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಉದ್ದೇಶದಿಂದ ಈ ನಮ್ಮ ಹೆಮ್ಮೆಯ ಕಾಲೇಜು ಸ್ಥಾಪನೆಗೊಂಡು ಶರವೇಗದಲ್ಲಿ ಪ್ರಗತಿ ಪಥದಲ್ಲಿ ದಾಪುಗಾಲನ್ನು ಇಡುತ್ತಿದೆ.

 

ನಮ್ಮ ಸಂಸ್ಥೆಯು ವಿಶ್ವ ವಿದ್ಯಾನಿಲಯ ಧನಸಹಾಯ ಆಯೋಗದ 2004 ರಅಧಿನಿಯಮದ ಸೆಕ್ಷನ್ 2ಎಫ್ ಅಡಿಯಲ್ಲಿ ಮಾನ್ಯತೆಯು ಪ್ರಾಪ್ತವಾಗಿದೆ. ನಂತರದ ದಿನಗಳಲ್ಲಿ 12ಬಿ ಮಾನ್ಯತೆಯನ್ನು ಕೂಡ 2005 ರಲ್ಲಿ ಪಡೆದಿದೆ. ನಮ್ಮಕಾಲೇಜು ಈಗಾಗಲೇ 3 ಭಾರಿ ನ್ಯಾಕ್ ಮೌಲ್ಯ ಮಾಪನಕ್ಕೆ ಒಳಗಾಗಿ ‘ಬಿ’ ಶ್ರೇಣಿಯನ್ನು ಪಡೆದಿರುತ್ತದೆ. ನಮ್ಮ ಸಂಸ್ಥೆಯು ರೂಸಾ ಅಡಿಯಲ್ಲಿಧನ ಸಹಾಯವನ್ನು ಅಭಿವೃದ್ಧಿ ಚಟುವಟಿಕೆಗಳಿಗಾಗಿ ಪಡೆದಿದೆ. ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಚಟುವಟಿಕೆಗಳು ಈ ಭಾಗದ ಮಹಿಳಾ ವಿದ್ಯಾರ್ಥಿನಿಯರ ಏಳಿಗೆಯಲ್ಲಿ ಸಫಲತೆಯನ್ನು ಹೊಂದಿದೆ. ನಮ್ಮ ಸಂಸ್ಥೆಗೆ ನಿರ್ದಿಷ್ಟವಾದ ಮುನ್ನೋಟ ದೂರದೃಷ್ಟಿಯಿದ್ದು ಗುಣಾತ್ಮಕ ಶಿಕ್ಷಣ ನೀಡಲು ಬದ್ದವಾಗಿದೆ. ಒಂದು ಉತ್ತಮ ಶೈಕ್ಷಣಿಕ ಸಂಸ್ಥೆಯಾಗಿರುವುದರ ಜೊತೆಯಲ್ಲಿಯೇ ವಿದ್ಯಾರ್ಥಿಗಳಿಗೆ ಸಾಮಾಜಿಕ, ಸಾಂಸ್ಕøತಿಕ ಮತ್ತು ಪರಿಸರಸಂಬಂಧಿಯಾದ ಅರಿವನ್ನು ಮೂಡಿಸುವುದರಲ್ಲಿ ಯಶಸ್ವಿಯಾಗಿದೆ. ಮತ್ತು ವಿದ್ಯಾರ್ಥಿನಿಯರ ಉತ್ತರೋತ್ತರ ಅಭಿವೃದ್ಧಿಗೆ ಭವ್ಯ ಅಡಿಪಾಯವನ್ನು ಹಾಕುವ ಪ್ರಯತ್ನದಲ್ಲಿ ನಿರಂತರವಾಗಿ ಸಾಗಿದೆ.

 

DCE Alert | Read More

Notifications | Read More

 • Exam Information

  Updated on 01/06/2020

 • NAAC Accreditation Report

  Updated on 18/10/2019

 • Events | Read More

  • No Events

  Gallery | View All