Department Profile

KANNADA DEPARTMNET

 

1. Name of the department                 :  KANNADA

2. Year of Establishment                     :  1948

3. About the Department

ಕಾಲೇಜಿನಲ್ಲಿ ಅಸ್ಥಿತ್ವದಲ್ಲಿರುವ ಕನ್ನಡ ವಿಭಾಗವು 1948ರಲ್ಲಿ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಪ್ರಾಮುಖ್ಯತೆ, ಭಾಷಾಜ್ಞಾನ, ಸಾಹಿತ್ಯದ ಅರಿವು ಉಂಟುಮಾಡಿದೆ. ಪ್ರತಿವರ್ಷವೂ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯದ ಬೋಧನೆಯನ್ನು ಮಾಡುವುದರ ಜೊತೆಗೆ, ಅವರ ಕನ್ನಡ ಭಾಷೆಯ, ನಾಡು-ನುಡಿಯ ಅರಿವು ಬೆಳೆಸುತ್ತಿದೆ. ಕನ್ನಡ ವಿಭಾಗದಿಂದ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಉಪನ್ಯಾಸ ಕಾರ್ಯಕ್ರಮಗಳ ಜೊತೆಗೆ ಗಾಯನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದು, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲಾಗುತ್ತಿದೆ. ಬೇರೆ ಕಾಲೇಜುಗಳಲ್ಲಿ ನಡೆಯುವ ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶಗಳನ್ನು ಕಲ್ಪಿಸಿ ಮಾರ್ಗದರ್ಶನವನ್ನು ಕನ್ನಡ ವಿಭಾಗದ ಮೂಲಕ ನೀಡಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಜ್ಞಾನ ವಿನಿಮಯ ಮಾಡಿಕೊಳ್ಳಲು ಅವಕಾಶ ದೊರೆಯುತ್ತಿದೆ. ಪ್ರತಿವರ್ಷವೂ ನಡೆಯುವ ಕನ್ನಡ ನಾಟಕ ಸ್ಪರ್ಧೆಗಳಲ್ಲಿ, ನಮ್ಮ ಕಾಲೇಜಿನ ಕನ್ನಡ ತಂಡವು ಭಾಗವಹಿಸಿ ಅನೇಕ ಬಹುಮಾನಗಳನ್ನು ಗಳಿಸಿಕೊಂಡಿರುತ್ತದೆ. ಜಾನಪದ ನೃತ್ಯ ಮುಂತಾದ ನೃತ್ಯಗಳಲ್ಲಿ ಕಾಲೇಜಿನ ಕನ್ನಡ ತಂಡವು ಅನೇಕ ಬಹುಮಾನಗಳನ್ನು ಗಳಿಸಿರುತ್ತದೆ. ಈ ರೀತಿಯ ನಾಟಕ ಪ್ರದರ್ಶನಕ್ಕೆ ಬೇಕಾದ ಅಭಿನಯ ತರಬೇತಿ, ಸಂಭಾಷಣಾ ಕೌಶಲ್ಯ ಮುಂತಾದ ತರಬೇತಿಗಳನ್ನು ಕಾಲೇಜಿನಲ್ಲಿ ನಡೆಸಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಕಾಲೇಜಿನಲ್ಲಿ “ಹೊನ್ನುಡಿ-ಕನ್ನಡ ಸಂಘ”ವು ನಿರಂತರವಾಗಿ ಶ್ರಮಿಸುತ್ತಿದೆ. ಇದರ ಜೊತೆಗೆ, ಎಲ್ಲಾ ಭಾಷೆಯವರನ್ನೂ ಒಟ್ಟುಗೂಡಿಸಿಕೊಂಡು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಚಟುವಟಿಕೆಗಳನ್ನು ನಡೆಸಲು, “ಸಾರಸ್ವತ ಸಂದೀಪನ-ಸರ್ವಭಾಷಾ ವೇದಿಕೆ” ಎಂಬ ಮತ್ತೊಂದು ಸಮಿತಿಯು ನಿರಂತರವಾಗಿ ಕನ್ನಡದ ವಾತಾವರಣವನ್ನು ಸೃಷ್ಟಿಸುತ್ತಿದೆ. ಕನ್ನಡ ಭಾಷೆಯ ಮೂಲಕ, ಜಾಗತೀಕರಣಕ್ಕೆ ಬೇಕಾದ ಆಲೋಚನೆ, ವಾಕ್‍ಚತುರತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕನ್ನಡ ವಿಭಾಗವು ನಿರಂತವಾಗಿ ಶ್ರಮಿಸುತ್ತಿದೆ. 

ಕಾಲೇಜಿನಲ್ಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಅಳವಡಿಕೆಯಾಗಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕನ್ನಡ ಭಾಷಾ ಪಠ್ಯಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸುವುದಕ್ಕೆ ಸಹಾಯಕವಾಗಿದೆ. ವಿದ್ಯಾರ್ಥಿಗಳು ಸೃಜನಶೀಲವಾಗಿ ಆಲೋಚನೆ ಮಾಡಲು ಅವಶ್ಯವಾದ ವಾತಾವರಣವನ್ನು ತರಗತಿಗಳಲ್ಲಿ ನಿರ್ಮಿಸಲಾಗುತ್ತಿದೆ. ಪಠ್ಯದ ಓದುವಿಕೆ, ಅದನ್ನು ಅರ್ಥ ಮಾಡಿಕೊಳ್ಳುವ ವಿಧಾನವನ್ನು ಕಲಿಸಲಾಗುತ್ತಿದೆ. ಬರೆಯುವ ಮತ್ತು ಮಾತನಾಡುವ ಕಲೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಕನ್ನಡ ಭಾಷಾ ಪಠ್ಯಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಬೆಳವಣಿಗೆಗೆ ಸಹಾಯಕವಾಗಿದೆ. ಸರ್ಕಾರಿ ಆರ್.ಸಿ.ಕಾಲೇಜಿನ ಕನ್ನಡ ವಿಭಾಗವು ಮೇಲಿನ ಉದ್ದೇಶಗಳನ್ನು ಈಡೇರಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಕನ್ನಡ ವಿಭಾಗದಲ್ಲಿರುವ ಅಧ್ಯಾಪಕ ವರ್ಗವು ಅತ್ಯುತ್ತಮವಾದ ಸಮರ್ಪಣಾ ಮನೋಭಾವನ್ನು ಹೊಂದಿದ್ದು, “ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಯೇ ನಮ್ಮ ಗುರಿ” ಎಂಬ ಘೋಷವಾಕ್ಯವನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುತ್ತಾರೆ.

 

4. Programmes offered                              :               (UG)  B.COM, B.B.A, B.COM-

                                                                          TOURISM AND B.B.A.-AVIATION

5. Students Strength(Minimum last 5 years)

6. List of Faculty Members

Name of the Faculty

Designation

Qualification

Specialization

Dr. NATARAJA D.K.

Assoc. Prof.

M.A., B.Ed., Ph.D.

Comparative  Studies

S.K. PREMAVATHY

Asst. Prof.

M.A.

Comparative  Studies

LAKSHMI K.

Asst. Prof.

M.A.

Cultural Studies

Dr.R. JYOTHILINGAIAH

Guest Faculty

M.A., B.Ed., Ph.D.

Folklore

Dr. GOWRAMMA

Guest Faculty

M.A., Ph.D.

Kannada Literature

HARISH S.R.

Guest Faculty

M.A.

Kannada Literature

MANUJA

 Guest Faculty

M.A.

Kannada Literature

RADHA K.M.

 Guest Faculty

M.A.

 Kannada Literature

 

7. Achievemnts                                            : Won Prizes in Literary Activities

8. Results (Last 5 Years)                               : -----

9. Students Research/Projects                       : -----

10. Certificate/add on/Skill Development Programmes:

1. Academic Year 2018-19

   a. Certificate Course: History of Kannada Literature Part-1

2. Academic Year 2018-19

  a. Certificate Course: History of Kannada Literature Part-1

  b. Certificate Course: History of Kannada Literature Part-2

DCE Alert | Read More

Events | Read More

Gallery | View All