Home

ಸರ್ಕಾರಿ ಪ್ರಥಮ ದರ್ಜೆ ಕಾಲೇಜು 

೨೦೦೭ ರಲ್ಲಿ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಹಲವು ಸರಕಾರಿ ಕಾಲೇಜುಗಳನ್ನು ತೆರೆದವು. ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೂಡ ಒಂದು. ಮೈಸೂರು ವಿಶ್ವವಿದ್ಯಾನಿಲಯದ ಸಂಯೋಜನೆ ಪಡೆದಿರುವುದು ಸಹಶಿಕ್ಷಣ ಸಂಸ್ಥೆ. ಕಲೆ, ವಿಘ್ನ್ಯಾನ, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರಗಳ ವಿಭಾಗಗಳನ್ನು ಹೊಂದಿರುವ ಕಾಲೀಜಿನ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಈ ಸರಣಿಯಲ್ಲಿ ಪ್ರಾರಂಭವಾದ ಕಾಲೇಜುಗಳಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಎರಡನೇ ಕಾಲೇಜು ಇದಾಗಿದೆ. ವೈವಿಧ್ಯತೆಯೇ ಈ ಕಾಲೀಜಿನ ಜೀವಾಳವಾಗಿದ್ದು, ವಿಭಿನ್ನ ಜಾತಿ, ಧರ್ಮ ಮತ್ತು ಸಾಮಾಜಿಕ, ಆರ್ಥಿಕ ಹಿನ್ನಲೆಗಳಿಂದ ಬಂಧ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಮಹಿಳಾ ಶಿಕ್ಷಣದ ದೃಷ್ಟಿಯಿಂದಲೂ ಕಾಲೀಜಿನ ಸಾಧನೆ ಪ್ರಶಂಸನೀಯವಾಗಿದ್ದು, ಗ್ರಾಮೀಣ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ . ಬೆಂಗಳೂರಿನ ನಂತರ ಅತ್ಯಂತ ಹೆಚ್ಚು ಉದ್ಯಮಗಳನ್ನು ಹೊಂದಿರುವ ಮತ್ತು ಸೇಲ್ಸ್ ತೆರಿಗೆಯನ್ನು ಪಾವತಿಸುವ ಎರಡನೆಯ ತಾಲ್ಲೂಕು ನಂಜನಗೂಡಗಿದೆ. 

 

Read More

ಮಿಷನ್

ಧ್ಯೇಯಗಳು

  • ಗುಣಮಟ್ಟದ ಶಿಕ್ಷಣ ನೀಡುವುದು
  • ಅವಶ್ಯಕ ಕೌಶಲಗಳ ಕಲಿಸುವಿಕೆ
  • ಅವಕಾಶಗಳ ಸೃಷ್ಟಿ
  • ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸ, ಸಂಶೋಧನಾ ಆಸಕ್ತಿ, ಕಾರ್ಯಕ್ಷಮತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯುಳ್ಳ ಪ್ರಜೆಗಳನ್ನಾಗಿ ರೂಪಿಸುವುದು
  • ಶೈಕ್ಷಣಿಕ ಉತ್ಕ್ರುಷ್ಟತೆಯುಳ್ಳ, ಸಾಮಾಜಿಕ ಹೊಣೆಗಾರಿಕೆಯುಳ್ಳ ವ್ಯಕ್ತಿಗಳನ್ನು ರೂಪಿಸುವುದು.
  • ವಿದ್ಯಾರ್ಥಿಗಳಲ್ಲಿ ಆತ್ಮಗೌರವವನ್ನು ಉದ್ದೀಪನಗೊಳಿಸಿ, ಬದುಕುವ ಕಲೆಯನ್ನು ಕಲಿಸುವುದು.
  • ಸ್ಪರ್ಧಾತ್ಮಕ ಪ್ರಪಂಚವನ್ನು ಎದುರಿಸಬಲ್ಲ ಕೌಶಲಗಳನ್ನು ಕಲಿಸುವುದು.
  • ಬದುಕಿನುದ್ದಕ್ಕೂ ಕಲಿಯಲು ಬೇಕಾದ ಧೃಡವಾದ ಶೈಕ್ಷಣಿಕ ಬುನಾದಿಯನ್ನು ಹುಟ್ಟುಹಾಕುವುದು.
  • ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸುವುದು.

ವಿಷನ್

ಉತ್ಕ್ರುಷ್ಟತೆಯನ್ನು ಸಾಧಿಸುವುದು ಮತ್ತು ಅಂಚಿಗೆ ಸರಿದವರ ಸಬಲೀಕರಣ.

DCE Alert | Read More

Events | Read More

  • No Events

Gallery | View All