Home

Dr. P. Dayananda Pai - P. Satisha Pai

Government First Grade College Mangalore, Carstreet -575001

   
                                                    

Government First Grade College Carstreet Mangalore was established in the year 2007-2008 by the Government of Karnataka, with the aim of realising the dreams of higher education for the economically backward sections of society, on the request of the then MLA Sri Yogesh Bhat. The college, which initially began to function in Government PU College, Balmatta, was shifted to its own building in the year 2008.

The college, located in the 1.87 Acre land donated by Sahukar Padmanabha Raghunatha Pai, has a well furnished two floor building built by the donation of 2.4crore from Dr Dayananda Pai, proprietor, Century Real Estate Holders and the grants in aid of Rs.2crore by the Government of Karnataka. At present, 5 classrooms have been built on the second floor under the new RUSA construction plan and the grants in aid of Rs.18 lakh by the Department of Collegiate Education. The project of 5 more classrooms and a Library Information centre will be undertaken with the financial aid of Rs.192 lakh from donors. The student strength, which was only 270 in the initial year, has reached 1700 within a span of 10 years, with the student strength of 1285 in the year 2016-17, 1675 in the year 2017-18, 2151 in the year 2018-19 and 2435 in the year 2019-20, an indication of the rapid growth index of the college. The student strength of the college is expected to exceed 2500 in the year 2020-21.

The college has acquired ‘B’ Grade under NAAC accredition in September 2015, the 9th year of its establishment and has the 2F recognition by UGC. The college has been recognised under the RUSA( Rashtriya Unnata Shikshana Abhiyana), a Central Government Scheme and has received financial help for the development of the college. The College has started 3 PG courses and MCom in the year 2016-17 and M.A Political Science and MSW in the year 2017-18 respectively. The college has been playing a crucial role in imparting quality higher education to the weaker sections of society since its establishment 12 years ago. It has moulded, shaped and ignited young minds through its curricular and co-curricular activities. It is the intention of the college to begin 3 PG and 2 UG courses in Science stream this year. The college has been successfully progressing under the able guidance of Mr. Vedavyasa Kamath, MLA, and also the President of College Development Committee. The college is the Nodal College of South Canara District Joint Director Office. Considering the monetary help extended by the donor, the college has been renamed as Dr P Dayananda Pai - P Sathisha Pai Government First Grade College.

 

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಈ ಕಾಲೇಜು 2007-08ನೇ ಶೈಕ್ಷಣಿಕ ವರ್ಷದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶವಿಟ್ಟುಕೊಂಡು ಅಂದಿನ ಶಾಸಕರೂ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಶ್ರೀ ಯೋಗೀಶ್ ಭಟ್‍ರವರ ಕೋರಿಕೆ ಮೇರೆಗೆ ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟಿತು. ಆರಂಭದಲ್ಲಿ ಬಲ್ಮಠದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ತಾತ್ಕಾಲಿಕ ತರಗತಿಗಳನ್ನು ಆರಂಭಿಸಿ, ತದನಂತರ 2008ರಲ್ಲಿ ರಥಬೀದಿಯ ಸ್ವಂತ ಕಟ್ತಡಕ್ಕೆ ಸ್ಥಳಾಂತರಗೊಂಡಿತು.

ಸಾಹುಕಾರ್ ಪದ್ಮನಾಭ ರಘುನಾಥ ಪೈಯವರು ಮಂಗಳೂರು ಮಹಾನಗರ ಪಾಲಿಕೆಗೆ ದಾನವಾಗಿ ನೀಡಿದ 1.67 ಎಕರೆ ಜಮೀನಿನಲ್ಲಿ, ಶ್ರೀಯುತ ಡಾ. ಪಿ. ದಯಾನಂದ ಪೈ, ಮಾಲಕರು, ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ.ಲಿ. ಬೆಂಗಳೂರು ಇವರ ರೂ. 2.45 ಕೋಟಿ ಧನ ಸಹಾಯದಿಂದ ಹಾಗೂ ಕರ್ನಾಟಕ ಸರ್ಕಾರದ ಅನುದಾನ 2.00 ಕೋಟಿ ರೂಪಾಯಿಗಳಲ್ಲಿ ರಚಿಸಲ್ಪಟ್ಟ ಕಟ್ಟಡ ಹೀಗೆ ಪ್ರಸ್ತುತ 2 ಮಹಡಿಯ ಸುಸಜ್ಜಿತ ಕಟ್ಟಡವನ್ನು ಹೊಂದಿರುತ್ತದೆ. ಪ್ರಸ್ತುತ 2ನೇ ಮಹಡಿಯಲ್ಲಿ 5 ತರಗತಿ ಕೋಣೆಗಳ ರಚನೆಯನ್ನು ರೂಸಾ ಅನುದಾನದ ಹೊಸ ಕಾಮಗಾರಿ ಯೋಜನೆಯಲ್ಲಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ 18ಲಕ್ಷ ರೂಪಾಯಿಗಳ ಅನುದಾನದಲ್ಲಿ ಒಂದು ಪ್ರಯೋಗಾಲಯ ಕೊಠಡಿಯ ಕಾಮಗಾರಿಯು ಪೂರ್ಣಗೊಂಡಿದ್ದು, ದಾನಿಗಳಿಂದ 192 ಲಕ್ಷ ವೆಚ್ಚದಲ್ಲಿ 5 ತರಗತಿ ಕೋಣೆಗಳ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ರಚನೆಯ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಸ್ಥಾಪನೆಯ ಆರಂಭದ ವರ್ಷದಲ್ಲಿ ಕೇವಲ 270 ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಸಂಸ್ಥೆ ಕೇವಲ 10 ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 1,700 ಕ್ಕೆ ಸಮೀಪಿಸಿದ್ದು, 2016-17ನೇ ಶೈಕ್ಷಣಿಕ ಸಾಲಿನಲ್ಲಿ 1,285 ವಿದ್ಯಾರ್ಥಿಗಳು, 2017-18ರಲ್ಲಿ 1,675 ವಿದ್ಯಾರ್ಥಿಗಳು, 2018-19ರಲ್ಲಿ 2,151 ವಿದ್ಯಾರ್ಥಿಗಳು ಹಾಗೂ 2019-20ರಲ್ಲಿ 2,435 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು, ಇದು ಈ ಸಂಸ್ಥೆ ತ್ವರಿತಗತಿಯಲ್ಲಿ ಬೆಳೆದು ಬಂದದಕ್ಕೆ ಸಾಕ್ಷಿಯಾಗಿದೆ. 2020-21ರ ಸಾಲಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ 2500ನ್ನು ದಾಟುವ ನಿರೀಕ್ಷೆಯಲ್ಲಿದೆ. ಕಾಲೇಜು ಆರಂಭಗೊಂಡ 9ನೇ ವರ್ಷದ 2015ರ ಸಪ್ಟೆಂಬರ್ ತಿಂಗಳಲ್ಲಿ ‘ನ್ಯಾಕ್’ ಸಂಸ್ಥೆಯಿಂದ ಪರಿಶೀಲನೆಗೊಳಪಟ್ಟು ‘ಬಿ’ ಶ್ರೇಣಿಯನ್ನು ಪಡೆದಿದ್ದು ಯುಜಿಸಿಯಿಂದ 2(ಎಫ್) ಮಾನ್ಯತೆಯನ್ನು ಹೊಂದಿರುತ್ತದೆ. 2015-16ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ರೂಸಾ (ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ)ದ ಯೋಜನೆಯಡಿ ಈ ಕಾಲೇಜು ಗುರುತಿಸಲ್ಪಟ್ಟಿದ್ದು ಕಾಲೇಜಿನ ಅಭಿವೃದ್ಧಿಗೆ ಆರ್ಥಿಕ ನೆರವು ಬಂದಿರುತ್ತದೆ. 2016-17ರ ಸಾಲಿನಲ್ಲಿ ಕಾಲೇಜಿನಲ್ಲಿ ಎಂ.ಕಾಂ. ಸ್ನಾತಕೋತ್ತರ ಕೋರ್ಸನ್ನು 2017-18ರಲ್ಲಿ ಎಂ.ಎ. ರಾಜ್ಯಶಾಸ್ತ್ರ ಮತ್ತು ಎಂ.ಎಸ್.ಡಬ್ಲ್ಯೂ ಕೋರ್ಸನ್ನು ಸಹ ಆರಂಭಿಸಲಾಗಿದೆ.
          ಈ ವಿದ್ಯಾಸಂಸ್ಥೆಯು ಸ್ಥಾಪನೆಯಾದ ಕಳೆದ 12 ವರ್ಷಗಳಿಂದ ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳು ಉತ್ಕೃಷ್ಟ ಮಟ್ಟದ ಉನ್ನತ ಶಿಕ್ಷಣವನ್ನು ಕನಿಷ್ಠ ವೆಚ್ಚದಲ್ಲಿ ಪಡೆಯಲು ಶಕ್ತರಾಗಿದ್ದಾರೆ. ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಮುಖಾಂತರ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿದೆ. ಈ ಸಾಲಿನಲ್ಲಿ ಕಾಲೇಜಿನಲ್ಲಿ 3 ವಿಜ್ಞಾನ ಸ್ನಾತಕೋತ್ತರ ಹಾಗೂ 2 ಸ್ನಾತಕ ಕೋರ್ಸುಗಳನ್ನು ಆರಂಭಿಸುವ ಉದ್ದೇಶವಿದೆ. ಮಾನ್ಯ ಶಾಸಕರೂ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಶ್ರೀ ಡಿ. ವೇದವ್ಯಾಸ ಕಾಮತ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಈ ಕಾಲೇಜು ಮಂಗಳೂರು ವಲಯದ ಜಂಟಿ ನಿರ್ದೇಶಕರ ಕಛೇರಿಯ ದ.ಕ. ಜಿಲ್ಲೆಯ ನೋಡಲ್ ಕಾಲೇಜು ಆಗಿರುತ್ತದೆ. ಕಾಲೇಜಿಗೆ ನೀಡಿದ ದಾನವನ್ನು ಪರಿಗಣಿಸಿ ಕಾಲೇಜಿಗೆ ಡಾ. ಪಿ. ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಎಂದು ಮರುನಾಮಕರಣ ಮಾಡಲಾಗಿದೆ.

 

DCE Alert | Read More

Notifications | Read More

    • There is no recent notification

Events | Read More

  • No Events

Gallery | View All