Home

ಪುರಾಣಗಳಲ್ಲಿ ಉಲ್ಲೇಖವಿರುವಂತೆ ಪ್ರಸ್ತುತ ಮಂಡ್ಯ ಎಂಬ ಪ್ರದೇಶದಲ್ಲಿ ಈ ಹಿಂದೆ ಮಾಂಡವ್ಯ ಎಂಬ ಋಷಿಯುಜೀವಿಸಿದ್ದರ ಕಾರಣದಿಂದಾಗಿ ಈ ಸ್ಥಳಕ್ಕೆ ಮಂಡ್ಯ ಎಂಬ ಹೆಸರು ಬಂದಿದೆ.  ದಕ್ಷಿಣ ಕರ್ನಾಟಕದಲ್ಲಿ ಒಂದು ಪ್ರಮುಖ ಜಿಲ್ಲೆಯಾಗಿದೆ.  ಈ ಜಿಲ್ಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯ ಪ್ರಪಂಚದಲ್ಲಿಯೇ ಪ್ರಸಿದ್ಧಿ ಹೊಂದಿದೆ.  ಕರ್ನಾಟಕದಲ್ಲಿಯೇಹಚ್ಚ ಹಸುರಿನ ನಾಡು ಮತ್ತು ಸಕ್ಕರೆಯ ನಾಡು ಎಂಬ ಪ್ರಖ್ಯಾತಿ ಹೊಂದಿದೆ.

 

      ಮೈಸೂರು ಸಂಸ್ಥಾನದ ಶ್ರೀ. ಕೃಷ್ಣರಾಜಒಡೆಯರು ಹಾಗೂ ಆಗಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರದೂರದೃಷ್ಟಿಯಫಲದಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಆದ್ಯತೆ ದೊರೆತು ಭದ್ರ ಬುನಾದಿಯನ್ನು ಹಾಕಿದರು.  ಅದರ ಫಲವಾಗಿ 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು.  ಉನ್ನತ ಶಿಕ್ಷಣದ ಬಾಗಿಲು ಎಲ್ಲೆಡೆ ತೆರೆಯುವಲ್ಲಿಸಹಕಾರಿಯಾಯಿತು.  ಇದರ ಪ್ರಭಾವದಿಂದಾಗಿ ಜಿಲ್ಲೆಯಾದ್ಯಂತ ಶೈಕ್ಷಣಿಕ ಸಂಸ್ಥೆಗಳು ಪ್ರಾರಂಭವಾದವು.  ಕೃಷಿ ಸಂಸ್ಕøತಿಯಆಗರವಾದ ಮಂಡ್ಯ ಜಿಲ್ಲೆಯ ಜನತೆಗೆ ಶಿಕ್ಷಣ ಲಭಿಸುವಂತಾಯಿತು.

 

     ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸರ್ಕಾರಿ ಇಂಟರ್ ಮೀಡಿಯೇಟ್ ವಿಜ್ಞಾನ ಕಾಲೇಜು 1948ರಲ್ಲಿ ಮಂಡ್ಯದಲ್ಲಿಸ್ಥಾಪಿತವಾಯಿತು.  ಈ ಕಾಲೇಜಿನ ಸ್ಥಾಪಕರಾಗಿ ಮತ್ತು ನಿರ್ವಾಹಕಾರಾದ ಶ್ರೀಯುತ. ನಾಗೇಶ್ ರಾವ್ ಅವರು ಸರಳವಾದ ಕಟ್ಟಡ ಶೈಲಿ ಹೊಂದಿರುವ ಮುನ್ಸಿಪಲ್ ಕಛೇರಿ ಕಟ್ಟಡದಲ್ಲಿ 80 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಕಾಲೇಜು ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಮತ್ತು ಕಟ್ಟಡ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆ ಹೊಂದಿ ಬಹಳ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ.

 

     1952ರಲ್ಲಿ ಇಂಟರ್ ಮೀಡಿಯೇಟ್ ಕಲಾ ವಿಭಾಗವೂ ಕೂಡ ಆರಂಭವಾಯಿತು.  1960ರಲ್ಲಿ ಈ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾಗಿಸೇರ್ಪಡೆಯಾಯಿತು.

 

     ಶಿಕ್ಷಣ ತಜ್ಞರವಿಚಾರವಂತರದೂರದೃಷ್ಟಿಯ ಫಲವಾಗಿ ಕಾಲೇಜಿನ ಸ್ವಂತ ಕಟ್ಟಡಕ್ಕಾಗಿದಾನಿಗಳಿಂದ, ನಾಗರೀಕರಿಂದದೇಣಿಗೆಯನ್ನು ಸಂಗ್ರಹಿಸಿ ಕಾಲೇಜಿಗಾಗಿ ಹೊಸ ಭೂಮಿಕೊಳ್ಳಲು ಸಾಮೂಹಿಕ ಚಳುವಳಿ ಆರಂಭಿಸಿದರು.  ಇದರ ಫಲವಾಗಿ 35 ಎಕರೆ ಭೂಮಿ ಕಟ್ಟಡ ದೊರೆಯಿತು.  1952ರಲ್ಲಿ ರಾಜ ಜಯಚಾಮರಾಜೇಂದ್ರಒಡೆಯರ್ ಅವರು ಈ ಕಟ್ಟಡದ ಶಂಕುಸ್ಥಾಪನೆಯನ್ನು ಮಾಡಿದರು.

     ಸರ್ಕಾರದ ನಿಯಮದ ಪ್ರಕಾರ ಈ ಕಾಲೇಜು ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿತು.  1963ರಲ್ಲಿ ಈ ಕಾಲೇಜು ಉನ್ನತೀಕರಣಗೊಂಡು ಪದವಿ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ದೊರಕಿತು.  ಪ್ರೊ. ಕೆ ಎಸ್ ನಂಜುಂಡಯ್ಯರವರು ಪದವಿ ಕಾಲೇಜು ಮೊಟ್ಟ ಮೊದಲು ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು.  1964ರಲ್ಲಿ ಮುನ್ಸಿಪಲ್ ಕಛೇರಿ ಸ್ಥಳದಿಂದ ಮಾತನಕಟ್ಟಡಕ್ಕೆಸ್ಥಳಾಂತರಗೊಂಡಿತು.  ವಿಜ್ಞಾನ ಮತ್ತು ಕಲಾ ಪದವಿ ಪೂರ್ವ ಮತ್ತು ಪದವಿ ತರಗತಿಗಳು ಕಾರ್ಯ ಆರಂಭಗೊಂಡಿತು.  1969ರಲ್ಲಿ ಬಾಲಕರ ಕಾಲೇಜು ಮತ್ತು ಮಹಿಳೆಯರ ಕಾಲೇಜು ಆಗಿ ವಿಂಗಡಣೆಗೊಂಡಿತು.  1971ರಲ್ಲಿ ಈ ಕಾಲೇಜಿಗೆ ಸುಸಜ್ಜಿತವಾದ ತರಗತಿಗಳು, ಪ್ರಯೋಗ ಶಾಲೆಗಳು, ವಿಶಾಲ ಉಪನ್ಯಸತರಗತಿಗಳ ನಿರ್ಮಾಣಕ್ಕೆ ಅವಕಾಶ ದೊರಕಿತು.  ಸರ್ಕಾರದ ಆದೆಶದಂತೆ 1997ರಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಗೆ ಒಳಪಟ್ಟು ಪದವಿ ಕಾಲೇಜು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿತು.

 

     ಈಗ ಪ್ರಸ್ತುತ ಈ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯು ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟು ಕಾರ್ಯ ನಿರ್ವಹಿಸುತ್ತದೆ.  ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಸುಮಾರು ಒಟ್ಟು 3200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  ಕಲಾ ವಿಭಾಗದಲ್ಲಿ 07 ವಿಷಯಗಳು, ವಿಜ್ಞಾನ ವಿಭಾಗದಲ್ಲಿ 8 ವಿಷಯರ, ವಿಷಯವಾರುಆಯ್ಕೆಯ.  ಅವಕಾಶ ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆಅವುಗಳೆಂದರೆ ಮನೋವಿಜ್ಞಾನ, ಭೂಗೋಳಶಾಸ್ತ್ರ, ಅಪರಾಧಶಾಸ್ತ್ರ, ಗಣಕವಿಜ್ಞಾನ ಇತ್ಯಾದಿ.  2005-06ರಲ್ಲಿ ಈ ಕಾಲೇಜು ಸ್ವಾಯತ್ತತೆಯನ್ನುಪಡೆದುಕೊಂಡಿತು.  ಈ ಕಾಲೇಜಿನ ಶೈಕ್ಷಣಿಕ ಗುಣಮಟ್ಟಕ್ಕೆನ್ಯಾಕ್ಸಮಿತಿಯಿಂದ ‘ಎ’ ಮಾನ್ಯತೆ ಪಡೆದಿದೆ.  ಈ ಕಾಲೇಜಿನಲ್ಲಿ ಹಲವು ಸ್ನಾತಕೋತ್ತರ ಪದವಿಗಳು ಲಭ್ಯವಿದೆ.  ಅವುಗಳೆಂದರೆ ಭೌತಶಾಸ್ತ್ರ, ಗಣಿತಶಾಸ್ತ್ರ ಮತ್ತು ಗಣಕವಿಜ್ಞಾನ, ವಾಣಿಜ್ಯಶಾಸ್ತ್ರ, ಕನ್ನಡ, ಇತಿಹಾಸ, ರಾಜ್ಯಶಾಸ್ತ್ರ ಅರ್ಥಶಾಸ್ತ್ರ ಸಮಾಜಶಾಸ್ತ್ರ.

 

   2010ರಲ್ಲಿ ನ್ಯಾಕ್ಸಮಿತಿಯಿಂದ ಈ ಕಾಲೇಜಿಗೆ ಮತ್ತೆ ‘ಎ’ ಮಾನ್ಯತೆಯೇಲಭಿಸಿದೆ. (2ನೇ ಆವೃತ್ತಿ, ಸಿಜಿಪಿಎ 3.11) ಹಾಗೂ  ಆಗಸ್ಟ್ 2016ರಲ್ಲಿ ಮತ್ತೆ ‘ಎ’ ಮಾನ್ಯತೆಯನ್ನೆಪಡೆದುಕೊಂಡಿತು (3ನೇ ಆವೃತ್ತಿ ಸಿಜಿಪಿಎ 3.22) 2012ರಲ್ಲಿ ಸ್ವಾಯತ್ತತೆಯ ಸ್ಥಾನವನ್ನು ಯುಜಿಸಿಸಂಸ್ಥೆಯು 2011-12 ರಿಂದ 2016-17ರವರೆಗೆ ವಿಸ್ತರಣೆ ಮಾಡಿತು.  ಸಿ.ಬಿ.ಸಿ.ಎಸ್ಪಠ್ಯವನ್ನು ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆಅನುಷ್ಠಾನಗೊಳಿಸಿದೆ.  ಭೌತಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳಿಗೆ ಮೈಸೂರು ವಿಶ್ವವಿದ್ಯಾನಿಲಯವುಸಂಶೋದನ ಕೇಂದ್ರವನ್ನಾಗಿ ಗುರುತಿಸಿದೆ.  2018-19 ಶೈಕ್ಷನಿಕ ಸಾಲಿನಲ್ಲಿ ರೂಸಾ ಅಡಿಯಲ್ಲಿ ಏಕೀಕೃತ ವಿಶ್ವವಿದ್ಯಾನಿಲಯವಾಗಿ (ರೂಸ) ಈ ಕಾಲೇಜು ಮಾರ್ಪಾಡಾಗುತ್ತಿದೆ. 

 

DCE Alert | Read More

Events | Read More

  • No Events

Gallery | View All