Admissions 2022-23
- Admissions
Admissions 2022-23
ಕಾಲೇಜಿನ ಸಾಮಾನ್ಯ ನಿಯಮಗಳು
1. ದಿನ ನಿತ್ಯದ ತರಗತಿಗಳು ಎರಡು ಹಂತಗಳಿವೆ. ಬೆಳಿಗ್ಗೆ 09.00 ರಿಂದ ಮದ್ಯಾಹ್ನ 01.00 ಗಂಟೆಯವರೆಗೆ, ಮದ್ಯಾಹ್ನ 01.30 ರಿಂದ ಸಂಜೆ 04.30 ರವರೆಗೆ ತರಗತಿಗಳು ನಡೆಯುತ್ತವೆ.
2. ಮೊದಲು ತರಗತಿ ಆರಂಭಗೊಳ್ಳುವ ಐದು ನಿಮಿಷಗಳ ಮೊದಲು ಎಚ್ಚರಿಕೆ ಗಂಟೆಯನ್ನು ನೀಡಲಾಗುವುದು.
3. ಪ್ರತಿ ನಿತ್ಯ ಶಾಲಾ ವಠಾರದಲ್ಲಿ ಉಪನ್ಯಾಸಕರನ್ನು ಪ್ರಥಮ ಸಂದರ್ಶನದಲ್ಲಿ ವಂದಿಸತಕ್ಕದ್ದು.
4. ವಿದ್ಯಾರ್ಥಿಯ ಹಾಜರಾತಿಯನ್ನು ಕರೆದಾಗ ಎದ್ದು ನಿಂತು ಉತ್ತರಿಸಬೇಕು.
5. ಪ್ರತಿ ವಿದ್ಯಾರ್ಥಿಗೆ ಪ್ರತಿ ವಿಷಯದಲ್ಲಿ 75% ರಷ್ಟು ಹಾಜರಾತಿ ಇದ್ದಲ್ಲಿ ಮಾತ್ರ ಪರೀಕ್ಷೆಯ ಪ್ರವೇಶ ಪತ್ರವನ್ನು ನೀಡಲಾಗುವುದು. ತರಗತಿಗಳಿಗೆ ಗೈರು ಹಾಜರಾದಲ್ಲಿ ರಜಾ ಅರ್ಜಿಯನ್ನು ಪ್ರಾಂಶುಪಾಲರಿಗೆ ನೀಡತಕ್ಕದ್ದು. ಅನಾರೋಗ್ಯ ಕಾರಣದಿಂದ ಗೈರು ಹಾಜರಾದಲ್ಲಿ ಸರ್ಕಾರಿ ವೈದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡತಕ್ಕದ್ದು.
6. ಕಾಲೇಜು ಆರಂಭ ಅಥವಾ ರಜೆಯ ಬಳಿಕ ತರಗತಿಗಳಿಗೆ ತಡವಾಗಿ ಹಾಜರಾಗುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.
7. ವಿದ್ಯಾರ್ಥಿಗಳು ಕಾಲೇಜಿನ ಸಾಂಸ್ಕøತಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
8. ತರಗತಿಗಳಿಗೆ ಸರಿಯಾಗಿ ಹಾಜರಾಗದಿರುವುದು, ಅಧ್ಯಾಪಕರು ಮತ್ತು ಕಾಲೇಜು ಸಿಬ್ಬಂದಿಯೊಂದಿಗೆ ದುರ್ವತನೆ, ಕಾಲೇಜು ಕೆಲಸಗಳನ್ನು ನಿರ್ಲಕ್ಷಿಸುವುದು, ಈ ರೀತಿಯ ಯಾವುದೇ ಬಗೆಯ ಅಶಿಸ್ತನ್ನು ಗಂಭೀರವಾಗಿ ಪರಿಗಣಿಸಿ ನಿಯಮದ ಪ್ರಕಾರ ತಾತ್ಕಲಿಕವಾಗಿ ಅಥವಾ ಶಾಸ್ವತವಾಗಿ ಶಿಕ್ಷೆ ದಂಡನೆಗಳನ್ನು ನೀಡಲಾಗುವುದು.
9. ಪ್ರಾಂಶುಪಾಲರ ಅನುಮತಿಯಿಲ್ಲದೆ ಯಾವುದೇ ವಿಷಯೇತರ ಪುಸ್ತಕ, ಪತ್ರಿಕೆಗಳನ್ನು ತರಗತಿಗಳಿಗೆ ತರಲು ಅವಕಾಶವಿಲ್ಲ.
10. ವಿದ್ಯಾರ್ಥಿಯ ಬೋಧನೆಗೆ ಅಡ್ಡಿಯಾಗುವ ಯಾವುದೇ ಸಂಘಟನೆಗಳನ್ನು ವಿದ್ಯಾರ್ಥಿಯು ಸೇರುವಂತಿಲ್ಲ. ಕಾಲೇಜಿಗೆ ವಿರುದ್ಧವಾಗಿ ಬೇರೆ ತಂಡದ ಸದಸ್ಯನಾಗಿ ಆಡುವಂತಿಲ್ಲ.
11. ಸರಕಾರ ಆಥವಾ ಆಡಳಿತ ವಿರುದ್ಧದ ರಾಜಕೀಯ ಚಳುವಳಿಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತಿಲ್ಲ. ಧರಣಿಗಳಲ್ಲಿ ಭಾಗವಹಿಸುವಂತಿಲ್ಲ, ಕಾಲೇಜು ಕಾಲಕಾಲಕ್ಕೆ ತರುವ ಶಿಸ್ತಿನ ನಿಯಮಗಳಿಗೆ ಅವರು ಬದ್ಧರಾಗಬೇಕು.
12. ಪ್ರಾಂಶುಪಾಲರ ಅನುಮತಿಯಿಲ್ಲದೆ ಮತ್ತು ಅಧ್ಯಾಪಕರ ಭಾಗವಹಿಸುವಿಕೆಯಿಲ್ಲದೆ ವಿದ್ಯಾರ್ಥಿಗಳು ಕಾಲೇಜು ಇಲ್ಲವೇ ತರಗತಿಯ ವತಿಯಿಂದ ಪಿಕ್‍ನಿಕ್ ಅಥವಾ ಪ್ರವಾಸಗಳನ್ನು ನಡೆಸಲು ಅನುಮತಿಯಿಲ್ಲ.
13. ಮುಂಚಿತವಾಗಿ ಅನುಮತಿ ಪಡೆದುಕೊಳ್ಳದೆ ವಿದ್ಯಾರ್ಥಿಯು ಯಾವ ತರಗತಿಯನ್ನು ತಪ್ಪಿಸುವಂತಿಲ್ಲ. ತಪ್ಪಿದಲ್ಲಿ ಪುನಃ ತರಗತಿಯನ್ನು ಸೇರಬೇಕಾದರೆ ಸಂಬಂಧಪಟ್ಟ ಉಪನ್ಯಾಸಕ ಮತ್ತು ಪ್ರಾಂಶುಪಾಲರ ಅನುಮತಿಯನ್ನು ಪಡೆದುಕೊಳ್ಳತಕ್ಕದ್ದು.
14. ತರಗತಿ ನಡೆಯುವಾಗ ಇನ್ನಿತರ ಸಮಯದಲ್ಲಿ ಕಿಟಕಿ ಮೂಲಕ ಮಾಡನಾಡುವುದು ಮತ್ತು ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ನಿಷೇದಿಸಲಾಗಿದೆ.
15. ಒಂದು ತರಗತಿಯ ವಿದ್ಯಾರ್ಥಿಗಳು ಇನ್ನೊಂದು ತರಗತಿಗೆ ಹೋಗುವಂತಿಲ್ಲ.
16. ಪ್ರತಿಯೊಬ್ಬ ವಿದ್ಯಾರ್ಥಿಯು ತರಗತಿಯ ಹೊರ ಮತ್ತು ಒಳಗಡೆ ಸ್ವಚ್ಛಮಾಡಲು ಸಹಕರಿಸುವುದು.
17. ತರಗತಿಯ ಡೆಸ್ಕು, ಬೆಂಚುಗಳು, ಕಾಲೇಜಿನ ಗೋಡೆಗಳ ಮೇಲೆ ಬರೆಯುವುದು, ಚಿತ್ರ ಬಿಡಿಸುವುದು, ಗೋಡೆಯ ಮೇಲೆ ಕಾಲು ಇಡುವುದು ಕಂಡು ಬಂದಲ್ಲಿ ನಿಯಮಗಳ ಪ್ರಕಾರ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುವುದು.
18. ಕಾಲೇಜಿನ ಸಮಯದಲ್ಲಿ ಕಾಲೇಜಿನಿಂದ ಹೊರಗಡೆ ಹೋಗುವಾಗ ತರಗತಿ ಉಪನ್ಯಾಸಕರ ಗಮನಕ್ಕೆ ತರುವುದು, ಒಂದು ವೇಳೆ ತರಗತಿ ಉಪನ್ಯಾಸಕರು ರಜೆಯಿದ್ದಲ್ಲಿ ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಅಥವಾ ಪ್ರಾಂಶುಪಾಲರ ಗಮನಕ್ಕೆ ತಂದು ಆಫೀಸಿನಲ್ಲಿರುವ ವಿದ್ಯಾರ್ಥಿಗಳ ಚಲನವಲನಾ ಪರಿಚಲನ ಪುಸ್ತಕದಲ್ಲಿ ನಮೂದಿಸುವುದು.
19. ಕಾಲೇಜಿನ ಅವಧಿಯಲ್ಲಿ ಪ್ರಾಂಶುಪಾಲರ/ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿಗಳ ಅಥವಾ ತರಗತಿ ಉಪನ್ಯಾಸಕರ ಅನಮತಿ ಇಲ್ಲದೆ ಕಾಲೇಜಿನ ಆವರಣದಿಂದ ಹೊರ ಹೋಗಿ ಏನಾದರೂ ತೊಂದರೆಗೊಳಗಾದರೆ ಅದಕ್ಕೆ ಕಾಲೇಜಿನ ಪ್ರಾಂಶುಪಾಲರಾಗಲಿ/ಕಾಲೇಜು ಜವಾಬ್ದಾರರಾಗುವುದಿಲ್ಲ.
20. ಕಾಲೇಜಿಗೆ ವಿದ್ಯಾರ್ಥಿಗಳು ಬೈಸಿಕಲನ್ನು ತರಬಹುದಾಗಿದೆ, ಒಂದು ವೇಳೆ ದ್ವಿಚಕ್ರವಾಹನವನ್ನು ತಂದಲ್ಲಿ ಪ್ರಾಂಶುಪಾಲರು ಗೊತ್ತುಪಡಿಸಿದ ಕಾಲೇಜಿನ ವಠಾರದಲ್ಲಿ ನಿಲುಗಡೆ ಮಾಡಬೇಕು.
21. ಸ್ನೇಹಿತರನ್ನು ಕಾಲೇಜಿಗೆ ಕರೆತರುವಂತಿಲ್ಲ, ಕಾಲೇಜಿನ ಹೊರಗಡೆ ಮಾತನಾಡಿ ಕಳುಹಿಸತಕ್ಕದ್ದು.
22. ವಿದ್ಯಾರ್ಥಿಗಳು ಸರ್ಕಾರ ನೀಡಿದ Tab ಮತ್ತು laptopನ್ನು ತರುವುದು, ಮೊಬೈಲ್ ತಂದಲ್ಲಿ LMS ಗೆ ಸಂಬಂಧಿಸಿದ ಕೆಲಸಗಳಿಗೆ ಬಳಸಿಕೊಳ್ಳುವುದು. ಬೇರೆ ಕೆಲಸಗಳಿಗೆ ಬಳಸಿಕೊಳ್ಳಕೂಡದು.
23. ವಿದ್ಯಾರ್ಥಿಗಳು ತರಗತಿ/ಕಾಲೇಜಿನ ವಠಾರದಲ್ಲಿ ಯಾವುದೇ ಕ್ಯಾಮರವನ್ನು ಬಳಸುವ ಹಾಗಿಲ್ಲ.
24. ತರಗತಿ ಅವಧಿಯಲ್ಲಿ ಕಾಲೇಜು ಆವರಣದಲ್ಲಿ ಯಾವುದೇ ರೀತಿಯ ತಿಂಡಿ ತಿನಿಸುಗಳನ್ನು ಪ್ರಾಂಶುಪಾಲರ ಅನುಮತಿಯಿಲ್ಲದೆ ವಿತರಿಸಿದಲ್ಲಿ ಮತ್ತು ತಿಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
25. ಕಾಲೇಜಿನ ಸ್ಟೇರ್‍ಕೇಸ್ ಮತ್ತು ಮೆಟ್ಟಿಲಿನ ಮೇಲೆ ಕುಳಿತುಕೊಳ್ಳಬಾರದು.
26. ಕುಡಿಯುವ ನೀರನ್ನು ಹಿತಮಿತವಾಗಿ ಬಳಸಬೇಕು. ಯಾವುದೇ ಕಾರಣಕ್ಕೂ ಫಿಲ್ಟರ್ ನೀರನ್ನು ಮುಖ, ಕೈ ತೊಳೆಯಲಿಕ್ಕೆ ಬಳಸಬಾರದು.
27. ಕಾಲೇಜಿನ ಹೊರಗಡೆ, ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಡಿದಲ್ಲಿ ತೊಡಗಿದ ಗಲಭೆಗೆ ಕಾರಣವಾಗುವ ವಿದ್ಯಾರ್ಥಿಗಳ, ಲೈಂಗಿಕ ಕಿರುಕುಳ ನೀಡುವ, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ ಕಾಲೇಜಿನ ಘನತೆಗೆ ದಕ್ಕೆ ತರುವ, ಮೊಬೈಲ್ ಮುಖಾಂತರ ಬೆದರಿಕೆ, ಆಶ್ಲೀಲ ಸಂದೇಶ ಕಳುಹಿಸುವ, ಸಿಗರೇಟ್ ಹಾಗೂ ಇನ್ನಿತರ ತಂಬಾಕು ಪದಾರ್ಥ/ಮದ್ಯಪಾನ ಮಾಡಿ ಬರುವ, ವಿದ್ಯಾರ್ಥಿಗಳ ಚಿನ್ನ/ಹಣ/ಡೆಬಿಟ್/ಕ್ರೆಡಿಟ್ ಕಾರ್ಡ್ ಕದಿಯುವ, ಉಪನ್ಯಾಸಕರನ್ನು ಏಕಚನದಲ್ಲಿ ಸಂಬೋದಿಸುವ, ಅವರಿಗೆ ಅಗೌರವ ತೋರಿಸುವ, ತರಗತಿ ತಪ್ಪಿಸಿ ಸುತ್ತಾಡುವ ವಿದ್ಯಾರ್ಥಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಮಾಡಿದ ತಪ್ಪು ಕ್ರಿಮಿನಲ್ ಸ್ವರೂಪವಾಗಿದಲ್ಲಿ ಕಾಲೇಜಿನ ವತಿಯಿಂದಲೇ ದೂರು ನೀಡಿ ಎಫ್.ಐ.ಆರ್ ದಾಖಲಿಸಲಾಗುವುದು.
28. ಸಮವಸ್ತ್ರ ನಿಯಮ ಉಲ್ಲಂಘಿಸುವ, ಐಡಿ ಕಾರ್ಡ್ ಧರಿಸದ, ಹೋಮ್‍ವರ್ಕ್ ಮಾಡಿ ಕೊಂಡುಬಾರದ, ಅಸೈನ್‍ಮೆಂಟ್ ಬರೆಯದ ಅಥವಾ ನಿಗದಿತ ಸಮಯದಲ್ಲಿ ಹಿಂದಕ್ಕೆ ನೀಡದ, ಪರೀಕ್ಷೆಗೆ ಅನಗತ್ಯ ಗೈರು ಹಾಜರಾಗುವ, ಕಾಲೇಜಿನ ಕಾರ್ಯಕ್ರಮಗಳಿಗೆ ಗೈರು ಹಾಜರಾಗುವ ವಿದ್ಯಾರ್ಥಿಗಳು ಶಿಸ್ತು ಕ್ರಮಕ್ಕೊಳಗಾಗಿ ಆಂತರಿಕ ಅಂಕಗಳನ್ನು ಕಳೆದುಕೊಳ್ಳುತ್ತಾರೆ.
29. ತರಗತಿಯಲ್ಲಿ ದಿನಕ್ಕೊಂದು ಸ್ಥಳದಲ್ಲಿ ಕುಳಿತುಕೊಳ್ಳುವ, ಉಪನ್ಯಾಸಕರೊಂದಿಗೆ ವಾಗ್ವಾದಕ್ಕಿಳಿಯುವ, ಪಾಠ ಪ್ರವಚನಗಳು ನಡೆಯುವಾಗ ಕಿಟಕಿ ಮುಖಾಂತರ ವ್ಯವಹಾರ ಮಾಡುವ, ಬೇರೆಯವರ ಪುಸ್ತಕಗಳನ್ನು ಎಳೆದಾಡುವುದು, ಬೇರೆಯವರ ಮೇಲೆ ಪೇಪರ್, ರಾಕೆಟ್ ಎಸೆಯುವ, ಬಬಲ್‍ಗಂ ಅನ್ನು ಸೀಟಿಗೆ ಗೋಡೆಗೆ ಅಂಟಿಸುವ ವಿದ್ಯಾರ್ಥಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.
30. ಬೆಳಿಗ್ಗೆ 10 ನಿಮಿಷ ಮದ್ಯಾಹ್ನ 5 ನಿಮಿಷಗಳ ಬಿಡುವಿನ ಅವಧಿಗೆ ಹೊರಗೆ ಹೋದವರಿಗೆ ಕ್ಲಾಸಿಗೆ ಬರಲು ಅವಕಾಶವನ್ನು ನೀಡಲಾಗುವುದು.
31. ಕಾಲೇಜಿನ ಅವಧಿಯಲ್ಲಿ ತುರ್ತಾಗಿ ಕಾಲೇಜಿನ ವಠಾರದರಿಂದ ಹೋಗಬೇಕಾದ ಸಂದರ್ಭದಲ್ಲಿ ಪ್ರಾಂಶುಪಾಲರ ಪೂರ್ವನುಮತಿಯನ್ನು ಪಡೆಯತಕ್ಕದ್ದು.
32. ಕಾಲೇಜಿಗೆ ಬರುವಾಗ ಮತ್ತು ಕಾಲೇಜಿನಿಂದ ಹೋಗುವಾಗ ರಸ್ತೆಯ ಇಕ್ಕೆಲದಲ್ಲಿ ಅಡ್ಡನಾಗಿ ಚಲಿಸಿ ಚಲಿಸುವ ವಾಹನಗಳಿಗೆ/ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಬಾರದು. ಇದನ್ನು ಮೀರಿ ತೊಂದರೆ ಉಂಟಾದಲ್ಲಿ ಕಾಲೇಜು ಅಥವಾ ಪ್ರಾಂಶುಪಾಲರು ಜವಾಬ್ದಾರರಲ್ಲ.
33. ವಿದ್ಯಾರ್ಥಿಗಳು ಲೈಸೆನ್ಸ್ ಇಲ್ಲದ ದ್ವಿಚಕ್ರವಾಹನ ಓಡಿಸುವುದು, ತ್ರಿಬಲ್ ರೈಡ್ ಮಾಡುವುದು, ಹೆಲ್ಮೆಟ್ ಇಲ್ಲದೆ ಹೋಗುವುದನ್ನು ಗಮನಿಸಲಾಗಿದ್ದು, ಇನ್ನು ಮುಂದಕ್ಕೆ ಇಂತಹ ತಪ್ಪುಗಳು ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗಳ ಬಗ್ಗೆ ಪೋಲಿಸರಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು.