Government First Grade College, Hullahalli, was established in July, 2007. Since then hundreds of students have successfully passed out from the college and trying to attain eminent positions in the social mainstream. Starting with a meager roll of 05 odd students in 2007, the institution has presently 314 students. Being a multi-faculty and multi-disciplinary co-educational institution, the students pursue various under-graduate courses in Humanities, Commerce & Management. The college has teaching faculty with the strength of 14 regular faculty members including Associate Professors and Assistant Professors & a sizable number of (10) guest teaching members working on the basis of academic arrangement. The campus has 09 lecture rooms, one computer lab and a library consisting of 10140 books and number of journals. |
ಶತಮಾನೋತ್ಸವ ಆಚರಿಸುತ್ತಿರುವ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರವ ನಮ್ಮ ಕಾಲೇಜು ೨೦೦೭-೦೮ ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಿ ಕಳೆದ ಹದಿಮೂರು ವರ್ಷ- -ಗಳಿಂದ ಹುಲ್ಲಹಳ್ಳಿ ಹಾಗು ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡು- -ವುದರ ಮೂಲಕ ಸಬಲೀಕರಣ ಮಾಡುವ ಜವಬ್ದಾರಿಯನ್ನು ನಿರ್ವಹಿಸಿಕೊಂಡು ಬರುತ್ತಿದೆ. ರೈತಾಪಿ ಹಾಗು ಸಾಮಾಜಿಕ ತಳ ಸಮುದಾಯಗಳಿಂದ ಬರುವ ವಿದ್ಯಾರ್ಥಿಗಳಲ್ಲಿ ಸ್ರಜನಶೀಲತೆ ಮತ್ತು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಲು ಕಾಲೇಜಿನಲ್ಲಿ ವಿವಿಧ ಸಮಿತಿಗಳ ಮೂಲಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾಲೇಜಿನ ಎಲ್ಲಾ ವಿಭಾಗಗಳಲ್ಲಿಅನುಭವಿ ಮತ್ತು ನುರಿತ ಅಧ್ಯಾಪಕರುಗಳಿಂದ ಪಠ್ಯದ ಜೊತೆಗೆ ಎನ್,ಎನ್,ಎಸ್ , ಸ್ಕೌಟ್ಸ್ ಮತ್ತು ಗೈಡ್ಸ್ ಹಾಗು ರೆಡ್ ಕ್ರಾಸ್ ಮುಂತಾದ ಪಠ್ಯೇತರ ಚಟು- -ವಟಿಕೆಗಳನ್ನು ವ್ಯವಸಿತವಾಗಿ ನಿರ್ವಹಿಸಿಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಘಟಕ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ, ಆಪ್ತ ಸಲಹೆ ಹಾಗು ಕ್ರೀಡಾ ಚಟುವಟಿಕೆಗಳ ಸೌಲಭ್ಯವಿರುತ್ತದೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿರುವ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದರ ಜೊತೆಗೆ ವಿವಿಧ ಸರ್ಕಾರಿ ಹಾಗು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುತ್ತಾರೆ. ಕೆಲವು ವಿದ್ಯಾರ್ಥಿಗಳು ಎನ್, ಇ , ಟಿ., ಎಸ್, ಎಲ್, ಇ , ಟಿ ಮತ್ತು ಪಿ. ಹೆಚ್.ಡಿ ಗಳಿಸಿಕೊಂಡಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಕಾಲೇಜು ಸುಸಜ್ಜಿತವಾದ ಕಟ್ಟಡ, ಗ್ರಂಥಾಲಯ, ಉಪಹಾರ ಗೃಹ, ವಿದ್ಯಾರ್ಥಿನಿ- -ಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ಮತ್ತು ಎಜುಸ್ಯಾಟ್ ತರಗತಿ ಸೌಲಭ್ಯವನ್ನು ಹೊಂದಿದೆ .ಇದರ ಜೊತೆಗೆ ವೃತಿ ಮಾರ್ಗದರ್ಶನ ಘಟಕವಿದ್ದು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. |