Admission 2022-23
- Admission 2022-23
Admission 2022-23
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೊಡ್ಡಬಳ್ಳಾಪುರ, ಕಾಲೇಜಿನಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನೂತನ ರಾಷ್ಟೀಯ ಶಿಕ್ಷಣ ನೀತಿ(NEP) ಅನುಸಾರ 2022-23ನೇ ಸಾಲಿನ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.
1. ನಮ್ಮ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಪದವಿ ತರಗತಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಅರ್ಜಿಗಳನ್ನು ಕಡ್ಡಾಯವಾಗಿ UUCMS Portal (https://uucms.karnataka.gov.in/Login/Index) ಮೂಲಕ ಸಲ್ಲಿಸಬೇಕಿರುತ್ತದೆ.
2. ಪ್ರಥಮ ವರ್ಷದ ಪದವಿ ತರಗತಿಗಳಿಗೆ UUCMS Portal (https://uucms.karnataka.gov.in/Login/Index) ಮೂಲಕ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರತಿಯೊಂದಿಗೆ, ಕಾಲೇಜು ಸೂಚಿಸುವ ದಿನಾಂಕದಂದು ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿ ಮತ್ತು ಇತರೆ ದಾಖಲೆಗಳನ್ನು ಪರಿಶೀಲನೆಗಾಗಿ(Document Verification) ಕಡ್ಡಾಯವಾಗಿ ಕಾಲೇಜಿನಲ್ಲಿ ಹಾಜರಾಗತಕ್ಕದ್ದು.
3. ವಿದ್ಯಾರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಯನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿದ ನಂತರ ದಾಖಲಾತಿ ಶುಲ್ಕ(ADMISSION FEE) ಅನ್ನು ಕಡ್ಡಾಯವಾಗಿ UUCMS Portal (https://uucms.karnataka.gov.in/Login/Index) ಮೂಲಕವೇ ಪಾವತಿಸಬೇಕು.
4. ಪ್ರಥಮ ವರ್ಷದ ದಾಖಲಾತಿ ಶುಲ್ಕ(ADMISSION FEE) ಅನ್ನು UUCMS Portal ಮೂಲಕ ಪಾವತಿದ ನಂತರ ವಿದ್ಯಾರ್ಥಿಗಳು Admission Fee Paid Receipt ಅನ್ನು ಕಾಲೇಜಿನಲ್ಲಿ ಸಲ್ಲಿಸಬೇಕಿರುತ್ತದೆ.
5. UUCMS Portal ನಲ್ಲಿ ಸಲ್ಲಿಸಿದ ಅರ್ಜಿ, ಮೂಲ ದಾಖಲೆಗಳ ಪರಿಶೀಲನೆ ಮತ್ತು ದಾಖಲಾತಿ ಶುಲ್ಕ ಪಾವತಿಸಿದ ವಿವರ ಮುಂತಾದವುಗಳನ್ನು ಪ್ರಾಂಶುಪಾಲರು ಪರಿಶೀಲಿಸಿದ ನಂತರ ಅಂತಿಮವಾಗಿ ಅನುಮೋದಿಸುತ್ತಾರೆ.
6. ಪ್ರಾಂಶುಪಾಲರು ಅಂತಿಮವಾಗಿ ಅನುಮೋದನೆ ನೀಡುವುದರ ಮೂಲಕ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಮೊಬೈಲ್ ನಂಬರ್‌ಗೆ ದಾಖಲಾತಿ ನೋಂದಣಿ ಸಂಖ್ಯೆಯನ್ನು ಕಲುಹಿಸಿಕೊಡಲಾಗುವುದು.
* ಕಾಲೇಜಿನ ಬಗ್ಗೆ ಮಾಹಿತಿ
* ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್/ಕಾಂಬಿನೇಷನ್
* ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸೌಲಭ್ಯಗಳು
* ಪ್ರಥಮ ವರ್ಷದ ಪದವಿ ತರಗತಿಗಳಿಗೆ ಅರ್ಜಿ ಸಲ್ಲಿಸುವ ವಿಧಾನ/ಮಾರ್ಗಸೂಚಿ
* ಪ್ರಥಮ ವರ್ಷದ ಪದವಿ ತರಗತಿಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
* 2022-23ನೇ ಪ್ರಥಮ ವರ್ಷದ ಸ್ನಾತಕ ಪದವಿ ಕೋರ್ಸ್ ದಾಖಲಾತಿ ಸಂಬಂಧ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸುತ್ತೋಲೆ