SEVA SINDHU

ಸೇವಾ ಸಿಂಧು

ಕರ್ನಾಟಕ ಸರ್ಕಾರವು “ಸೇವಾ ಸಿಂಧು” ಯೋಜನೆಯನ್ನು ಪ್ರಾರಂಭಿಸಿದ್ದು, ಸರ್ಕಾರದ ಸೇವೆಗಳು ನಾಗರೀಕರ ಮನೆ ಬಾಗಿಲಿಗೆ ತಲುಪುವ ಹಾಗೆ ಕಾರ್ಯ ನಿರ್ವಹಿಸುತ್ತಿದೆ. “ಸೇವಾ ಸಿಂಧು” ಯೋಜನೆಯು ಕರ್ನಾಟಕ ಸರ್ಕಾರದ ಸಮಗ್ರ ಸರ್ಕಾರಿ ಇಲಾಖೆಗಳ ಸೇವೆಗಳನ್ನು ವಿವಿಧ ಮಾರ್ಗಗಳಿಂದ ಸಮಸ್ತ ನಾಗರೀಕರಿಗೆ ತಲುಪಿಸಲು, ಸಮಗ್ರ ನಾಗರೀಕರ ಸೇವೆಗಳ ಕೇಂದ್ರಗಳಾದ ಬೆಂಗಳೂರು ಒನ್, ಸಿಎಸ್ ಸಿ ಸೇವಾ ಕೇಂದ್ರಗಳು, ಕರ್ನಾಟಕ ಒನ್, ಅಟಲ್ ಜೀ ಜನ ಸ್ನೇಹಿ ಕೇಂದ್ರ ಮತ್ತು ಬಾಪೂಜಿ ಕೇಂದ್ರಗಳಿಗೆ ನೀಡಿರುತ್ತದೆ. ಈ ಕೇಂದ್ರಗಳು ಎಲ್ಲಾ ಸರ್ಕಾರಿ ಇಲಾಖೆಗಳ ಸೇವೆಗಳನ್ನು ನಾಗರೀಕರಿಗೆ ಒಂದೇ ವೇದಿಕೆಯಲ್ಲಿ ಒದಗಿಸಲು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಸರ್ಕಾರದ ಸೇವೆಗಳು ನಗದು ರಹಿತ , ಕಾಗದ ರಹಿತ ವಿಧಾನವನ್ನು ಜಾರಿಗೊಳಿಸಲು ಈ ಯೋಜನೆಯ ,ಮುಖ್ಯ ಗುರಿಯಾಗಿರುತ್ತದೆ. ಈ ಯೋಜನೆಯು ನಾಗರೀಕರಿಗೆ ಸರ್ಕಾರಿ ಸೇವೆಗಳನ್ನು ವಾಸ್ತವಿಕವಾಗಿ, ಪಾರದರ್ಶಕವಾಗಿ, ಒದಗಿಸುತ್ತಿದೆ ಮತ್ತು ಉತ್ತಮ ಹೊಣೆಗಾರಿಕೆಯನ್ನು ನಿರ್ಮಿಸುತ್ತಿದೆ.

ಸಮಗ್ರ ನಾಗರೀಕ ಸೇವಾ ಕೇಂದ್ರಗಳು ಯಾಂತ್ರಿಕ ವ್ಯವಸ್ಥೆಯಿಂದ ನಾಗರೀಕರ ಸಮಸ್ಯೆಗಳನ್ನು, ತೊಂದರೆಗಳನ್ನು, ಕಚೇರಿಗಳಿಗೆ ಅಲೆದಾಡುವ ಸಮಯವನ್ನು ಕಡಿಮೆ ಮಾಡಲು ಮತ್ತು ಸರಳ ಮಾಡಲು ಈ ಸೇವಾ ಸಿಂಧು ಯೋಜನೆಯು ಸೇವೆಗಳನ್ನು ನಾಗರೀಕರಿಗೆ ಒದಗಿಸುತ್ತಿದೆ ಮತ್ತು ಇಲಾಖೆಗಳ ಕಾರ್ಯ ವಿಧಾನವನ್ನು ಸುಗಮಗೊಳಿಸಲು, ಇಲಾಖೆಗಳ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಈ ಯೋಜನೆಯು ಪರೋಪಕಾರಿಯಾಗಿ ಬೆಂಬಲಿಸುತ್ತಿದೆ.

Link to Sevasindhu Portal

 

DCE Alert | Read More

Events | Read More

Gallery | View All