Home

About Us

ಕಾಲೇಜಿನ ಬಗ್ಗೆ ಮಾಹಿತಿ
ಮುಂದೆ ಓದಿ

ವಿಶನ್ - ಕಾಣ್ಕೆ

ಸಮಾಜದ ಎಲ್ಲ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಮೂಲಕ, ಉದ್ಯೋಗಸ್ಥರಾಗುವ ಮತ್ತು ಉದ್ಯೋಗದಾತರಾಗುವ ಅರ್ಹತೆಗಳನ್ನು ಪಡೆದುಕೊಂಡು ಈ ಕಾಲೇಜಿನಿಂದ ಹೊರಹೋಗುವಂತಾಗಬೇಕು ಮತ್ತು ಆ ಮೂಲಕ ಸಮಾಜದ ಹಾಗೂ ದೇಶದ ನಿಜವಾದ ಸಂಪನ್ಮೂಲಗಳಾಬೇಕು ಎಂಬುದು ಈ ಕಾಲೇಜಿನ ಕಾಣ್ಕೆಯಾಗಿದೆ.

ಮಿಶನ್ -ಕಾರ್ಯತಂತ್ರ

  1. ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಸೃಜನಾತ್ಮಕ ಪಾಲುಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಅನುಭವದ ಮೂಲಕ ಕಲಿಕೆಯನ್ನು ಸಾಧಿಸುವುದು.
  2. ವಿದ್ಯಾರ್ಥಿಗಳಲ್ಲಿ ಹಾಗೂ ಬೋಧಕರಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸುವುದು.
  3. ಲಭ್ಯ ತಂತ್ರಜ್ಞಾನವನ್ನು ಬಳಸಿ ಗುಣಮಟ್ಟವನ್ನು ಉಳಿಸಿ ಬೆಳೆಸಿ ಉತ್ಕೃಷ್ಠತೆಗಾಗಿ ಯತ್ನಿಸುವುದು ಮತ್ತು ಉುತ್ತರದಾಯಿತ್ವವನ್ನು ಹೊಂದಿರುವುದು.
  4. ವಿದ್ಯಾರ್ಥಿ ಕೇಂದ್ರಿತ ಯೋಜನೆಗಳನ್ನು ಹಮ್ಮಿಕೊಳ್ಳುವುದು ಮತ್ತು ಸರಕಾರ ಹಾಗೂ ಇತರ ಸಂಸ್ಥೆಗಳ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.

ಉದ್ದೇಶಗಳು :

  1. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣದ ಅವಕಾಶವನ್ನು ಒದಗಿಸುವುದು.
  2. ವಿದ್ಯಾರ್ಥಿಗಳ ಹಾಗೂ ಬೋಧಕರ ಪ್ರತಿಭೆ ಹಾಗೂ ಸೃಜಶೀಲತೆಗಳ ವಿಕಸನಕ್ಕೆ ಅವಶ್ಯವಾದ ವೇದಿಕೆಗಳನ್ನು ಒದಗಿಸುವುದು.
  3. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಪ್ರೇರೇಪಿಸುವುದು.
  4. ಸಾಮಾಜಿಕ ಜಾಗೃತಿ, ಪರಿಸರ ಕಾಳಜಿ, ನಾಯಕತ್ವಗುಣ, ದೇಶಭಕ್ತಿ ಇತ್ಯಾದಿ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ರೂಢಿಸುವುದು.
  5. ಪರಿಣಾಮಕಾರಿ ಸಾಮಾಜಿಕ ಕಾರ್ಯಗಳಲ್ಲಿ ಸಹಭಾಗಿಯಾಗುವುದು.
  6. ಸಂಶೋಧನೆ ಮತ್ತು ಅಭಿವೃದ್ಧಿಪರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.

DCE Alert | Read More

Notifications | Read More

  • NAAC Accreditation Report

    Updated on 24/06/2015

  • Events | Read More

    • No Events

    Gallery | View All