Principal Desk

                          

ಸುಮಾರು ನಾಲ್ಕು ಎಕರೆಯಷ್ಟು ವಿಶಾಲವಾದ ಆವರಣದಲ್ಲಿರುವ ಬಂಗಾರುತಿರುಪತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ವಚ್ಚವಾದ ಗಾಳಿ-ಬೆಳಕಿನಿಂದ ಕೂಡಿದ ವಿಶಾಲವಾದ ಕೊಠಡಿಗಳು, ಸುಸಜ್ಜಿತವಾದÀ ಗ್ರಂಥಾಲಯ, ಕಂಪ್ಯೂಟರ್ ಪ್ರಯೋಗಾಲಯ, ಕ್ರೀಡಾ ವಿಭಾಗ, ಎನ್.ಎಸ್.ಎಸ್, ರೆಡ್-ಕ್ರಾಸ್, ಭಾರತ್ ಸೌಟ್ಸ್ ಮತ್ತು ಗೈಡ್ಸ್, ವಿದ್ಯಾರ್ಥಿ ಅಪ್ತಸಲಹಾ ಸಮಿತಿ, ಸಾಂಸ್ಕøತಿಕ ಸಮಿತಿ, ನುರಿತ ಅಧ್ಯಾಪಕ ವೃಂದ, ಸೇವಾ ಮನೋಬಾವದ ಕಾರ್ಯಾಲಯ ಸಿಬ್ಬಂದಿ ಮತ್ತು ಇನ್ನಿತರೆ ಪೂರಕ ಕಾರ್ಯ ಚಟುವಟಿಕೆಗಳೊಂದಿಗೆ ಕಾಲೇಜು ಸದಾ ಕ್ರಿಯಾಶೀಲವಾಗಿರುತ್ತದೆ.
ಕೇವಲ ವಿದ್ಯಾರ್ಥಿಗಳ ಪಾಠ-ಪ್ರವಚನ ಮತ್ತು ಶೈಕ್ಷಣಿಕ ಪ್ರಗತಿಗೆ ಮಾತ್ರ ಒತ್ತು ನೀಡದೆ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಎಲ್ಲಾ ಪ್ರಮುಖ ಚಟುವಟಿಕೆಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಕಾಲೇಜಿನ ಫಲಿತಾಂಶ ವರ್ಷದಿಂದ ವರ್ಷಕ್ಕೆ ಉತ್ತಮಗೊಳ್ಳುತ್ತಾ, ಪ್ರಸಕ್ತ ಶೇ. 98 ರಷ್ಟು ಫಲಿತಾಂಶವÀನ್ನು ಪಡೆಯಲು ಸಫಲರಾಗಿದ್ದೇವೆ. ಜೊತೆಗೆ ಪ್ರತಿವರ್ಷ ವಿವಿಧ ಸ್ನಾತಕೊತ್ತರ ಪದವಿ ಶಿಕ್ಷಣಕ್ಕೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚು-ಹೆಚ್ಚು ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿರುತ್ತಿರುವುದು ಸಂತಸದಾಯಕ ವಿಷಯವಾಗಿದೆ. ಇದರೊಂದಿಗೆ ಪ್ರತಿ ವರ್ಷ ಕೆಲವು ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಸರ್ಕಾರಿ/ಇತರೆ ಹುದ್ದೆಗಳಿಗೆ ನೇಮಕಗೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ವಿಶೇಷವಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅಂತರ ವಿಶ್ವವಿದ್ಯಾಲಯ/ ವಲಯ/ ರಾಜ್ಯ/ರಾಷ್ಟ್ರ/ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನ ಹಾಗೂ ಪಾರಿತೋಷಕಗಳನ್ನು ಪಡೆದಿರುತ್ತಾರೆ.

ಶ್ರೀ ರಮೇಶ್ ನಾಯಕ್
ಪ್ರಭಾರಿ ಪ್ರಾಂಶುಪಾಲರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಬಂಗಾರು ತಿರುಪತಿ.

DCE Alert | Read More

Notifications | Read More

 • Home

  Updated on 15/01/2021

 • CONSENT LETTER FROM STUDENTS

  Updated on 11/12/2020

 • Covid-19 SOP

  Updated on 11/12/2020

 • Events | Read More

  Gallery | View All